ಧೇನುವಾಟಿಕಾ ಗೋಶಾಲೆ, ಶೃಂಗೇರಿ
ಸನಾತನ ಧರ್ಮಾವಲಂಬಿಗಳಿಗೆ ಗೋವುಗಳು ಅತ್ಯಂತ ಪೂಜನೀಯವಾದವು. ಅಂತಹ ಗೋವುಗಳ ಸಂರಕ್ಷಣೆಗೆ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠವು ಹಿಂದಿನಿಂದಲೂ ಕಟಿಬದ್ಧವಾಗಿದೆ. ಪೀಠದ ೩೫ನೇ ಅಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರ ಕಾಲದಲ್ಲಿ ‘ಧೇನುವಾಟಿಕಾ’ ಎಂಬ ಹೆಸರಿನಲ್ಲಿ ಗೋಶಾಲೆಯನ್ನು ಆರಂಭಗೊಳಿಸಲಾಗಿತ್ತು. ಪ್ರಸ್ತುತ ೩೬ನೇ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಆದೇಶದಂತೆ ಈಗಲೂ ಸಹ ಈ ಗೋಶಾಲೆಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
‘ಗಾವೋ ವಿಶ್ವಸ್ಯ ಮಾತರಃ’ (ಗೋವುಗಳು ಜಗತ್ತಿಗೆ ತಾಯಿಯಂತೆ) ಎಂಬ ವಚನವನ್ನು ಪರಿಪಾಲನೆ ಮಾಡುತ್ತಾ, ಗೋಮಾತೆಯ ಸಂರಕ್ಷಣೆ, ಆರೈಕೆ ಮತ್ತು ಪಾಲನೆಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ. ಈ ಗೋಶಾಲೆಯಲ್ಲಿ ಕೇವಲ ಗೋವುಗಳನ್ನು ಸಾಕುವದಷ್ಟೇ ಅಲ್ಲದೆ, ಅವುಗಳನ್ನು ಪವಿತ್ರತೆ, ದಯೆ ಮತ್ತು ದೇವತ್ವದ ಸ್ವರೂಪಗಳಾಗಿ ಭಾವಿಸಿ ಆರಾಧಿಸಲಾಗುತ್ತದೆ.
ಸಂರಕ್ಷಣೆಯ ಮಹತ್ವ
ಧೇನುವಾಟಿಕಾ ಗೋಶಾಲೆಯು ಧಾರ್ಮಿಕ, ಸಾಂಸ್ಕೃತಿಕ ಮತ್ತು ಪರಿಸರದ ದೃಷ್ಟಿಯಿಂದ ಅತಿ ಮುಖ್ಯವಾದ ಅಂಗವಾಗಿದೆ ಏಕೆಂದರೆ:
ಆಧ್ಯಾತ್ಮಿಕ ಸೇವೆ – ಹಾಲು, ಮೊಸರು, ತುಪ್ಪ ಇತ್ಯಾದಿಗಳು ದೇವರ ನಿತ್ಯ ಪೂಜೆಗಳಲ್ಲಿ ಹಾಗೂ ಧಾರ್ಮಿಕ ಕ್ರಿಯೆಗಳಲ್ಲಿ ಒಂದು ಅವಿಭಾಜ್ಯವಾದ ಅಂಗವಾಗಿದೆ.
ಗೋಮಾತೆಯ ರಕ್ಷಣೆ – ಭಾರತೀಯ ಹವಾಮಾನಕ್ಕೆ ಹೊಂದಿಕೊಂಡಿರುವ ಪಾರಂಪರಿಕ ತಳಿಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು.
ಸಹಜ ಕೃಷಿ ಮತ್ತು ಪರಿಸರ – ಗೋಮೂತ್ರ ಮತ್ತು ಗೋಮಯದಿಂದ ಸಾವಯವ ಕೃಷಿ ಕೈಗೊಂಡು, ಭೂಮಿಯನ್ನು ಸಮೃದ್ಧಗೊಳಿಸಿ, ಪರಿಸರ ಸ್ನೇಹಿ ಜೀವನವನ್ನು ಉತ್ತೇಜಿಸಲಾಗುತ್ತಿದೆ.
ಸಂಸ್ಕೃತಿ ಮತ್ತು ಪರಂಪರೆ – ಜಗದ್ಗುರುಗಳ ಅಪ್ಪಣೆಯಂತೆ ‘ಧೇನುವಾಟಿಕಾ ಗೋಶಾಲೆ’ಯು ಗೋಸೇವೆಯ ಮಹತ್ತ್ವವನ್ನು ಸಾರುತ್ತದೆ ಮತ್ತು ಜನರಲ್ಲಿ ಭಕ್ತಿ, ಶ್ರದ್ಧೆ, ದಯೆ ಮುಂತಾದ ಧಾರ್ಮಿಕಭಾವನೆಯನ್ನು ಜಾಗೃತಗೊಳಿಸುತ್ತದೆ.
ಈ ಗೋಶಾಲೆಯ ಸಂರಕ್ಷಣೆಯ ಮೂಲಕ ಶೃಂಗೇರಿ ಶಾರದಾ ಪೀಠವು ಧರ್ಮ, ಪರಂಪರೆ ಹಾಗೂ ಪರಿಸರಗಳನ್ನು ಸಮಾನವಾಗಿ ಪೋಷಿಸುವ ಗೋವಿನ ಪವಿತ್ರ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತಿದೆ.
ಶ್ರೀಶ್ರೀ ಜಗದ್ಗುರುಗಳವರ ಅನುಗ್ರಹದಿಂದ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಗೋಸಂರಕ್ಷಣೆಯು ಅತ್ಯಂತ ಮಹತ್ವದ ಸೇವೆಯಾಗಿ ನಡೆಯುತ್ತಿದೆ. ಗೋಶಾಲೆಯಲ್ಲಿ ಸದ್ಯಕ್ಕೆ ಸುಮಾರು ೫೦೦ಕ್ಕೂ ಹೆಚ್ಚು ಗೋವುಗಳು ಸಂರಕ್ಷಿಸಲ್ಪಟ್ಟಿವೆ.
ಶ್ರೀಮಠದ ಗೋಶಾಲೆಯಲ್ಲಿ ಗೋವುಗಳಿಗೆ ಉತ್ತಮ ಆಹಾರ, ಪರಿಶುದ್ಧ ನೀರು, ಪ್ರೀತಿಪೂರ್ವಕ ಸೇವೆ, ಸಮರ್ಪಕ ವೈದ್ಯಕೀಯ ಚಿಕಿತ್ಸೆ ಹಾಗೂ ಆರೈಕೆಯನ್ನು ನೀಡಲಾಗುತ್ತದೆ.
ಈ ರೀತಿಯಾಗಿ ಶ್ರೀ ಶಾರದಾ ಪೀಠದ ಗೋಶಾಲೆಯು ಕೇವಲ ಗೋವಿನ ರಕ್ಷಣೆಗೆ ಮಾತ್ರವಲ್ಲದೆ ಭಾರತೀಯ ಸಂಸ್ಕೃತಿ, ಧಾರ್ಮಿಕತೆ ಹಾಗೂ ಪರಿಸರ ಸಂರಕ್ಷಣೆಯ ಸಂವರ್ಧನೆಗೂ ಪ್ರಮುಖ ಕೇಂದ್ರವಾಗಿದೆ.
Dhenuvatika Goshala, Sringeri
For followers of Sanātana Dharma, cows are considered supremely sacred. The Dakshinamnaya Sringeri Sharada Peetham has always been committed to the protection of such revered cows. During the period of the 35th Acharya, Jagadguru Shankaracharya Sri Sri Abhinava Vidyatirtha Mahaswamiji, a goshala (cow shelter) was established under the name “Dhenuvatika.” Even today, under the instructions of the 36th Jagadguru Shankaracharya Sri Sri Bharati Tirtha Mahaswamiji, this goshala is being further developed in a special manner.
Following the dictum “Gāvo viśvasya mātaraḥ” (Cows are verily the mothers of the world), the goshala is engaged in the proper protection, care, and nurturing of Gomata. Here, cows are not merely reared, but are revered and worshipped as embodiments of purity, compassion, and divinity.
The Importance of Preservation
The Dhenuvatika Goshala is of immense significance from religious, cultural, and ecological perspectives, because:
Spiritual Service – Milk, curd, ghee, and other products form an inseparable part of daily worship and religious rituals.
Protection of Gomata – Preserving and passing on to future generations the traditional native breeds that are well-suited to the Indian climate.
Natural Farming and Ecology – Promoting organic farming with cow urine and dung, enriching the soil, and fostering an eco-friendly way of life.
Culture and Tradition – As ordained by the Jagadgurus, the goshala upholds the greatness of go-seva (cow service) and awakens devotion, reverence, and compassion in people.
Through this noble service of cow protection, the Sringeri Sharada Peetham continues to uphold Dharma, tradition, and the environment equally.
Devotees who wish to take part in the sacred cause of Go Samrakshanam may offer their contributions through the following link: https://donate.sringeri.net/online-donation/sringeri


